ಗುರುವಾರ, ಮೇ 1, 2025

ಮನಸಿನ ನೆಮ್ಮದಿಗಾಗಿ

ಅರಿತರೂ ಅರಿಯದಂತೆ,
ಕಂಡರೂ ಕಾಣದಂತೆ,
ಕೇಳಿದರೂ ಕೇಳದಂತೆ,
ಅತ್ತರೂ ಹೇಳದಂತೆ ,
ನೊಂದರೂ ಕಾಣದಂತೆ,
ನಿನ್ನ ಪಾಡಿಗೆ ನೀನೀರು,
ನಿನ್ನ ಮನಸಿನ ನೆಮ್ಮದಿಗಾಗಿ.

ಕೆದಕಿದಷ್ಟೂ ರಾಡಿಯಾಗುವ,
ತಿಳಿದಷ್ಟು ಮನಸು ನೋಯುವ,
ಕೇಳಿದಷ್ಟು ಮೌನ ವಹಿಸುವ, 
ಭಾವಬಂಧನದಿಂದ ಹೊರಗೆ ಬಂದು,
ಹೊಸತು ಹುಡುಕುವ ತವಕ ನಮ್ಮಲಿರಲಿ,
ನಿಟ್ಟುಸಿರು ಬಿಟ್ಟು ಮನಸು ಹಗುರಾಗಿಸುವ,
ವಿದ್ಯೆ ಮರೆಯದಿರಲಿ.

ಎಲ್ಲ ಹಳೆ ನೋವುಗಳ, ಕೋಪ ತಾಪಗಳ,
ಬಿಟ್ಟು ಸಾಗೋಣ ಮುಂದೆ,
ಒಳಗಡೆಯೆ ಮುಚ್ಚಿಟ್ಟು, ಅದು ವೃಣವಾಗುವ ಮುನ್ನ, ತಡೆಯದೆ ಹಚ್ಚೋಣ ನಗುವಿನ ಮುಲಾಮು, 
ಹರಿದು ನದಿಯಾಗಲಿ ಕಣ್ಣೀರ ಧಾರೆ,
ಹೊಸ ಹುಲ್ಲು ಚಿಗುರಲಿ, 
ಬರಡು ಮರುಭೂಮಿಯಲಿ ,

ಕೆಡುಕು ಮಾಡುವ ಕೈಗಳಿರಲಿ,
ಅಣಕವಾಡುವ ಬಾಯಿಯಿರಲಿ,
ಕೆಂಡ ಕಾರುವ ಕಣ್ಣೆ ಇರಲಿ,
ಅಳುಕಬೇಡ, ಅಂಜಬೇಡ,
ನಂಬಿದವನು ಕಾವ ನೋಡ,
ಮನದಲಿನಿತು ನೋಯಬೇಡ,  
ಅವನ ಲೀಲೆ ಮರೆಯಬೇಡ.
ಒಳಿತ ದಾರಿ ತೊರೆಯಬೇಡ,
ನಿನ್ನ ಮನಸು ನೀನು ನೋಡ,
ನಿನ್ನ ಮನಸು ನೀನು ನೋಡ.



ಕಾಮೆಂಟ್‌ಗಳಿಲ್ಲ:

ಗುರು ವಂದನೆ-1

ನಮ್ಮ ಬಾಳಲ್ಲಿ ಹಲವು ಗುರುಗಳು ಬಂದಿರುತ್ತಾರೆ. ಹಾಗೆಂದು ಅವರೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವರು ಮಾತ್ರ ಸದಾಕಾಲ ಮನದಾಳದಲ್ಲಿ ಬೆಳಗುವ ನಂದಾ ದೀಪದಂತೆ, ನಿರಂತರವ...