ಕೂದಲು ಉದುರಲು ಕಾರಣಗಳು
- ಕೆಲವೊಂದು ಔಷಧಗಳ ಬಳಕೆ, ಉದಾಹರಣೆಗೆ ಕಾನ್ಸರ್ ಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆಗಳು ಇತ್ಯಾದಿ.
- ನೀರಿನ ಬದಲಾವಣೆ (ಹಳ್ಳಿಯಲ್ಲಿದ್ದವರು ಪಟ್ಟಣಕ್ಕೆ ಹೋದಾಗ, vice versa)
- ಹವಾಮಾನ ಬದಲಾವಣೆ,(ಮಳೆಗಾಲ, ಚಳಿಗಾಲ)
- ಒತ್ತಡದಿಂದ (ಚಿಂತೆಯಿಂದ ಆರೋಗ್ಯ ಹಾಳಾಗುತ್ತದೆ)
- ಜೀವನಶೈಲಿಯ ಬದಲಾವಣೆ,(ಆಹಾರ ನಿದ್ದೆಯಲ್ಲಿ ವ್ಯತ್ಯಾಸ)
- ಥೈರಾಯ್ಡ್ ಸಮಸ್ಯೆ ಕೂಡ ಕೂದಲಿನ ಸಮಸ್ಯೆಗೆ ಒಂದು ಕಾರಣ.
- ಅನುವಂಶೀಯ ಕಾರಣಗಳು(ಹೆತ್ತವರಲ್ಲಿ,ಒಡಹುಟ್ಟಿವರಲ್ಲಿ ಕಡಿಮೆ ಕೂದಲು ಇರುವಾಗ).
- ವಯಸ್ಸಿನ ಕಾರಣ(ನಲವತ್ತರ ನಂತರ ಕೂದಲು ತೆಳ್ಳಗಾಗುತ್ತದೆ)
ಸರಳ ಪರಿಹಾರಗಳು
ನಮ್ಮ ಕೆಲವೊಂದು ಪ್ರಯತ್ನಗಳು,ನಮ್ಮ ಕೂದಲನ್ನು
ಇನ್ನಷ್ಟು ಹಾಳಾಗದಂತೆ ತಡೆಯಬಲ್ಲವು. ಇರುವ ಪರಿಸ್ಥಿತಿ ಸುಧಾರಿಸಲು ಈ ಕೆಳಗಿನ ವಿಷಯಗಳು ಸಹಾಯ ಮಾಡಬಲ್ಲವು.
ನಾವು ಬದಲಾಯಿಸಲು ಆಗದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.
- ಸೊಪ್ಪು,ತರಕಾರಿಗಳ ಸೇವನೆ ಬಹಳ ಮುಖ್ಯ.
- ವಾರದಲ್ಲಿ ಎರಡು ಮೂರು ಬಾರಿ ತಲೆ ಸ್ನಾನ ಮಾಡಬೇಕು.
- ಸ್ನಾನದ ಮೊದಲು ನಮಗೆ ಸರಿಹೊಂದುವ ಎಣ್ಣೆ ಹಚ್ಚಿ ಮಾಲೀಸು ಮಾಡಬೇಕು.
- ಸ್ನಾನದ ನೀರು ಹೆಚ್ಚು ಬಿಸಿ ಇರಬಾರದು.
- ಸೌಮ್ಯವಾದ, ಅಲ್ಪ ಪ್ರಮಾಣದ ಶಾಂಪೂ ಬಳಸಬೇಕು.
- ಒದ್ದೆ ತಲೆಯನ್ನು ಬಾಚಬಾರದು.
- ಬಾಚಣಿಗೆಯನ್ನು ಆಗಾಗ ಸ್ವಚ್ಚಗೊಳಿಸಿ ಉಪಯೋಗಿಸಬೇಕು.
- ಚೆನ್ನಾಗಿ ನೀರು ಕುಡಿಯಬೇಕು.
- ಕೂದಲು ಯಾಕೆ ಉದುರುತ್ತಿದೆ ಎಂಬುದರ ಕಾರಣ ತಿಳಿದರೆ ಪರಿಹಾರವೂ ಸುಲಭ.
- ಕೆಲವೊಂದು ಸಮಯದಲ್ಲಿ ಕೂದಲು ಸಹಜವಾಗಿಯೇ ಹೆಚ್ಚು ಉದುರುತ್ತದೆ. ಉದಾಹರಣೆಗೆ, ಮಳೆಗಾಲದಲ್ಲಿ ಸಹಜವಾಗಿ ಕೂದಲು ಉದುರುತ್ತದೆ. ಮತ್ತು ಆ ಜಾಗದಲ್ಲಿ ಹೊಸ ಕೂದಲು ತಾನಾಗಿ ಹುಟ್ಟುತ್ತದೆ.
- ತುಂಬಾ ಕಡಿಮೆ ಸಮಯದಲ್ಲಿ, ಹೆಚ್ಚು ಹೆಚ್ಚು ಕೂದಲು ಉದುರಿದರೆ ಮಾತ್ರ ಸಮಸ್ಯೆ. ಸಮಸ್ಯೆಗಳು ತೀವ್ರವಾಗಿದ್ದರೆ, ವೈದ್ಯರನ್ನು ಕಾಣಬೇಕು.
- ತಲೆಹೊಟ್ಟು ಉಂಟಾದರೆ ಮೆಂತೆ ಅಥವಾ ದಾಸವಾಳದ ಹೇರ್ ಪ್ಯಾಕ್ ಮಾಡಿ.
ಕೆಲವೊಂದು ಸರಳ ಉಪಾಯಗಳು, ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಮಾಡಬಲ್ಲವು.
ಸರಳ ಉಪಾಯಗಳು
- ವಿಗ್ ಧರಿಸಬಹುದು.
- ತಲೆಯನ್ನು ಪೂರ್ತಿ ಬೋಳಿಸಿ, ಹೊಳೆಯುವ ದುಂಡಗಿನ ತಲೆಯನ್ನು ಹೊಂದಿರುವುದು ಈಗಿನ ಟ್ರೆಂಡ್.
- ಹಣಕಾಸಿನ ಅನುಕೂಲವಿದ್ದವರು, ಕೂದಲು ಕಸಿ ಮಾಡಿಸಿಕೊಳ್ಳಬಹುದು.
ಇನ್ನೊಂದು ವಿಷಯ. ಇರುವ ಪರಿಸ್ಥಿತಿಯನ್ನು ಸುಧಾರಿಸಲು ಆಗುವ ಎಲ್ಲ ಪ್ರಯತ್ನವನ್ನೂ ಮಾಡೋಣ. ಅದರ ಹೊರತಾಗಿಯೂ, ಯಾವದೇ ಪ್ರಗತಿ ಕಾಣದಿದ್ದರೆ,
ವಾಸ್ತವವನ್ನು ಒಪ್ಪಿಕೊಳ್ಳುವುದು ಜಾಣತನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ