ಮನಸಿನ ನೆಮ್ಮದಿಗಾಗಿ
ಮನದಾಳದ ಮಾತುಗಳಿಗೆ ಬರಹದ ರೂಪ ಕೊಡುವ ಒಂದು ಸಣ್ಣ ಪ್ರಯತ್ನ
ಭಾನುವಾರ, ಜೂನ್ 15, 2025
CBSEಯಿಂದ ಸ್ಟೇಟ್ ಬೋರ್ಡ್ ಗೆ
ಗುರುವಾರ, ಮೇ 29, 2025
ಅಡುಗೆ ಎಂಬ ಕಲೆ
ಸೋಮವಾರ, ಮೇ 26, 2025
ಹೆತ್ತವರು ಭಾರವಾದರೆ?
ಶನಿವಾರ, ಮೇ 24, 2025
ತೂಕ ಹೆಚ್ಚಿದೆಯೇ
ಭಾನುವಾರ, ಮೇ 18, 2025
ಗುರು ವಂದನೆ-1
ಭಾನುವಾರ, ಡಿಸೆಂಬರ್ 1, 2024
ಮಾತು ಮುತ್ತು
"ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು".
- ಒಳ್ಳೆಯವರ ಮಾತು ಯಾವಾಗಲೂ ಉತ್ತಮವಾಗಿರುತ್ತದೆ.
- ಅವರು ಕಡಿಮೆ ಮಾತನಾಡುತ್ತಾರೆ. ಅದಕ್ಕೆ ಹೆಚ್ಚು ಅರ್ಥವಿರುತ್ತದೆ.
- ಅವರು ಯಾರನ್ನು ನೋಯಿಸುವುದಿಲ್ಲ.
- ಸರಿಯಾಗಿ ಯೋಚಿಸಿ, ಚಿಂತಿಸಿ ನಿಧಾನವಾಗಿ ಮಾತನಾಡುತ್ತಾರೆ.
- ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಹಿಂದಿನಿಂದ ಮಾತನಾಡುವುದು ಅವರಿಗೆ ಇಷ್ಟವಾಗುವುದಿಲ್ಲ.
- ಕೆಟ್ಟವರು ಮಾತು ಶುರು ಮಾಡಿದರೆ ಅದನ್ನು ಕೇಳಲಾಗುವುದಿಲ್ಲ. ಕಿವಿ ಮುಚ್ಚುವ ಎಂದೆನಿಸುತ್ತದೆ.
- ಇವರು ಯಾವಾಗ ಬಾಯಿ ಮುಚ್ಚುತಾರೆ ಎಂದು ಕಾಯುವಂತೆ ಆಗುತ್ತದೆ.
- ಅವರ ಬಾಯಲ್ಲಿ ಒಳ್ಳೆಯ ಮಾತು ಬರುವುದಿಲ್ಲ.
- ಒಂದೋ ಚಾಡಿ ಹೇಳುತ್ತಾರೆ, ಇಲ್ಲ ಯಾರಿಗೋ ಬಯ್ಯುತ್ತಿರುತ್ತಾರೆ ,
- ಇಲ್ಲ ಬೇಡದ ವಿಚಾರ, ಅವರಿವರ ಮನೇ ಸುದ್ದಿ ಮಾತನಾಡಿ ಮನೆ ಹಾಳು ಮಾಡುತ್ತಿರುತ್ತಾರೆ.
- ಅವರಿಗೆ ಬುದ್ಧಿಯಿಲ್ಲ. ನಮಗೆ ನೆಮ್ಮದಿ ಇಲ್ಲ.
- ದಿನಾ ಅದೇ ಮಾತು ಕೇಳುತ್ತಿದ್ದರೆ ನಾವು ಅವರಂತೆ ಆಗುತ್ತೇವೆ.
ಮಿಕ್ಕಿ
ಎಲ್ಲಿದೆ ನೆಮ್ಮದಿ?
ಶನಿವಾರ, ನವೆಂಬರ್ 16, 2024
ವಿಚ್ಚೇದನಗಳ ಕಾರಣ,ಪರಿಹಾರ
ಹಿಂದಿನ ಕಾಲದಲ್ಲಿ ವಿಚ್ಚೇದನದ ಕಾರಣ ಮತ್ತು ಪರಿಣಾಮಗಳು
ಹಿಂದೆಲ್ಲ ಅವಿಭಕ್ತ ಕುಟುಂಬಗಳು ಇತ್ತು.ಮನೇ ತುಂಬಾ ಜನರಿದ್ದರು. ಮನೆಯ ಹಿರಿಯರು ಪ್ರತೀ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಮಾತು ಮೀರುವ ದೈರ್ಯ ಯಾರಿಗೂ ಇರಲಿಲ್ಲ.ಅದು ಬರೀ ಭಯ ಮಾತ್ರ ಅಲ್ಲ, ಗೌರವವೂ ಇತ್ತು. ಅಂತಹ ಕಾಲದಲ್ಲಿ ವಿಚ್ಛೇದನಗಳು ಬಲು ಅಪರೂಪ. ಕೆಲವೊಂದು ಬಾರಿ ಪರಿಸ್ಥಿತಿಗಳು ಕೈಮೀರಿ ಪತಿಪತ್ನಿ ದೂರಾಗುತ್ತಿದ್ದರು. ತಪ್ಪು ಯಾರದ್ದೇ ಆಗಿದ್ದರೂ, ಗಂಡ ಬಿಟ್ಟವಳು ಎಂಬ ಹಣೆಪಟ್ಟಿ ಹೆಣ್ಣಿನ ಪಾಲಿಗೆ ಕಾಯಂ ಆಗಿ ಇರುತಿತ್ತು. ಆಮೇಲಿನ ಅವಳ, ಅವಳ ಮಕ್ಕಳ ಜೀವನ ನರಕಸದೃಶ್ಯವಾಗಿರುತಿತ್ತು. ಅವಳಿಗೆ ತವರು ಮನೆಯಲ್ಲಿ ಯಾವ ಆದರವೂ ಸಿಗುತ್ತಿರಲಿಲ್ಲ. ಕಾರಣ,ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬುದು ಬರೀ ಗಾದೆಮಾತಾಗಿರದೆ ನಿಜವೆಂದೇ ನಂಬಿದ ಕಾಲವದು.ಅದು ಅನಿವಾರ್ಯವೂ ಆಗಿತ್ತು. ಮನೆ ತುಂಬ ಮಕ್ಕಳು. ಅವರ ಹೊಟ್ಟೆಬಟ್ಟೆ ನೋಡಿಕೊಳ್ಳುವುದೇ ದೊಡ್ಡ ಸಾಹಸ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಸಾಕಪ್ಪಾ ಸಾಕು, ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅವರು ತಿರುಗಿ ಮನೆಗೆ ಬಂದರೆ ಹೇಗಿರಬೇಡ!? ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳಾಗಿರುತಿದ್ದರು. ತಮ್ಮ ಮನೆಯ ವಾಸ್ತವ ಪರಿಸ್ಥಿತಿ ಅರಿತಿದ್ದ ಹೆಣ್ಣು ಮಕ್ಕಳು, ತವರು ಮನೆಯ ದಾರಿ ಮರೆತವರಂತೆ, ಎಲ್ಲ ಕಷ್ಟ ನುಂಗಿಕೊಂಡು, ಎಲ್ಲರ ಜೊತೆ ಹೊಂದಿಕೊಂಡು ಹೇಗೋ ಬಾಳುತ್ತಿದ್ದರು. ನೂರರಲ್ಲಿ ಒಬ್ಬರು ಸುಖವಾಗಿಯೂ ಇದ್ದರು.
ಇಂದಿನ ಕಾಲದ ವಿಚ್ಚೇದನಗಳ ಕಾರಣಗಳು
ಈಗ ಕಾಲ ಬದಲಾಗಿದೆ. ಎಲ್ಲೆಲ್ಲು ವಿಭಕ್ತ ಕುಟುಂಬಗಳು. ಓದಿ, ಕೆಲಸ ಪಡೆದು ಅಚ್ಚು ಕಟ್ಟಾಗಿ ಮನೆ ಮಾಡಿಕೊಂಡು ತಮ್ಮ ಪಾಡಿಗೆ ತಾವಿರುವ ಕುಟುಂಬಗಳು. ಒಂದೋ ಎರಡೋ ಮಕ್ಕಳು.
- ಅತಿ ಮುದ್ದಿನಿಂದ ಬೆಳೆಸಿ, ಓದಿಸಿ, ಬೇಕಾದ್ದು ಕೊಡಿಸಿ, ಕಷ್ಟ,ನಷ್ಟ, ಹೊಂದಾಣಿಕೆ ಅರಿಯದೆ ಬೆಳೆದ ಮಕ್ಕಳು, ಅದೇ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ.
- ತುಸು ಏರುಪೇರಾದರೂ ಸಹಿಸುವ ಶಕ್ತಿ ಅವರಿಗಿಲ್ಲ.
- ತನ್ನದೇ ಮಾತು ನಡೆಯಬೇಕೆಂಬ ಹಟ, ಅಹಂ.
- ಸಾಮಾಜಿಕ ಜಾಲತಾಣಗಳ ಪ್ರಭಾವಿತರಾಗಿ, ಚಂಚಲ ಮನಸಿನಿಂದ ಆಕರ್ಷಣೆ, ಆಮಿಷಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.
- ಯಾವುದೇ ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪುಗಳಿಗೆ ಬೆಲೆ ತೆರುತ್ತಿದ್ದಾರೆ.
- ಕೆಲವೊಂದು ಬಾರಿ ಅತಿಯಾಸೆಗೆ ಬಲಿಯಾಗುತ್ತಾರೆ.
- ಪರಸ್ಪರರ ಬಗ್ಗೆ ಇರುವ ಅಪನಂಬಿಕೆಯೂ ವಿಚ್ಛೇದನದ ಪ್ರಮುಖ ಕಾರಣಗಳಲ್ಲಿ ಒಂದು.
- ಗಂಡ ಮತ್ತು ಮಕ್ಕಳು ಮಾತ್ರ ತನ್ನ ಸಂಸಾರ ಎನ್ನುವ ಸ್ವಾರ್ಥಿ ಹೆಣ್ಣುಮಕ್ಕಳು,
- ಮದುವೆ ಆದ ಮೇಲೆ ,ನೀನು ನಿನ್ನ ಮನೆಯವರನ್ನು ನಿನ್ನ ಸ್ವಂತಿಕೆಯನ್ನು ಮರೆತುಬಿಡು ಎನ್ನುವ ಗಂಡಸರು.
ವಿಚ್ಚೇದನವನ್ನು ಕಡಿಮೆ ಮಾಡಲು ಉಪಾಯಗಳು
- ಗಂಡು ಮಕ್ಕಳು ಹೆಣ್ಣನ್ನು ತನ್ನಂತೆ ಗೌರವಿಸಲು ಕಲಿಯಬೇಕು.
- ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅದಕ್ಕೆ ಬೆಂಬಲಿಸಬೇಕು.
- ಎಲ್ಲ ಕೆಲಸಗಳನ್ನು ಅವರ ಜೊತೆ ಹೊಂದಿಕೊಂಡು ಮಾಡಬೇಕು.
- ಹೆಣ್ಣು ಮಕ್ಕಳು, ತಮ್ಮ ಗಂಡನನ್ನು ಮತ್ತು ಅವರ ಮನೆಯವರನ್ನು ತಮ್ಮ ಸ್ವಂತದವರಂತೆ ಪ್ರೀತಿಸಲು, ಗೌರವಿಸಲು ಕಲಿಯಬೇಕು.
- ತಮ್ಮ ಗಂಡನ ಇತಿಮಿತಿಗಳನ್ನು ಅರಿತು ಅದಕ್ಕೆ ತಕ್ಕಂತೆ ಹೊಂದಿಕೊಂಡು ಬದುಕಬೇಕು.
- ಜೀವನಸಂಗಾತಿಯ ಭಾವನೆಗಳನ್ನು, ಅಭಿರುಚಿಗಳನ್ನು ಗೌರವಿಸಬೇಕು.
- ಬಿನ್ನಾಭಿಪ್ರಾಯಗಳು ಸಹಜ. ತನ್ನದೇ ಹಟ ಸಾದಿಸದೆ ಅನುಸರಿಸಿಕೊಂಡು ಹೋಗಬೇಕು.
- ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ, ತಮ್ಮ ಹೆತ್ತವರ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಸರಿಯಾಗಿ ಯೋಚಿಸಬೇಕು.
- ತಮ್ಮ ಒಂದು ನಿರ್ಧಾರದಿಂದ ಆಗುವ ಪರಿಣಾಮಗಳ ಬಗ್ಗೆ ಸರಿಯಾಗಿ ಯೋಚಿಸಬೇಕು.
ಹದಿಹರೆಯ- ಮಕ್ಕಳು ಮತ್ತು ಹೆತ್ತವರು
- "ಹುಚ್ಚುಕೋಳಿ ಮನಸ್ಸು, ಅದು ಹದಿನಾರರ ವಯಸ್ಸು" ಹಾಡಿನ ಸಾಲಿನಂತೆ, ಮಕ್ಕಳ ಮನಸ್ಸು ಸೂಕ್ಷ್ಮವಾಗಿ, ಚಂಚಲವಾಗಿ, ಮುಗ್ದವಾಗಿ, ಅಪಕ್ವವಾಗಿ ಇರುತ್ತದೆ.
- ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ತಾಳ್ಮೆಯಾಗಲಿ,ಪ್ರಬುದ್ಧತೆಯಾಗಲಿ ಅವರಿಗಿರುವುದಿಲ್ಲ.
- ಬುದ್ಧಿಮಾತು ಕೇಳುವ ಮನಸ್ಥಿತಿಯೂ ಅವರಿಗಿರುವುದಿಲ್ಲ.
- ನಾವು ಏನಾದ್ರೂ ಹೇಳಲು ಹೋದರೆ, ಒಂದೋ ಸುಮ್ಮನಿರುತ್ತಾರೆ, ಅಥವಾ ಕೇಳದವರಂತೆ ನಟಿಸುತ್ತಾರೆ, ಅಥವಾ ನನಗೆ ಏನೂ ಹೇಳಲು ಬರಬೇಡಿ ಎನ್ನುತ್ತಾರೆ.
- ಆ ಕಡೆ ದೊಡ್ಡವರೂ ಅಲ್ಲ, ಈ ಕಡೆ ಸಣ್ಣವರೂ ಅಲ್ಲ. ಅವರಿಗೆ ಏನು ಹೇಳಬೇಕು, ಹೇಗೆ ಹೇಳಬೇಕು, ಎಷ್ಟು ಹೇಳಬೇಕು ಎಂದು ತಿಳಿಯದೆ ಅಪ್ಪ ಅಮ್ಮ ಗೊಂದಲಕ್ಕೆ ಒಳಗಾಗುತ್ತಾರೆ.
- ಅವರು ಗಳಿಸಿದ ಎಲ್ಲ ಅನುಭವಗಳನ್ನು ಉಪಯೋಗಿಸಿದರೂ, ಈ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂದು ತಿಳಿಯುದಿಲ್ಲ.
- ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅವರು ಹರಸಾಹಸ ಪಡುತ್ತಿರುತ್ತಾರೆ.
- ಒಂದು ಕಡೆ ಬೇರೆ ಬೇರೆ ರೀತಿಯ ಆಕರ್ಷಣೆಗಳು ಅವರನ್ನು ಸೆಳೆಯುತ್ತವೆ.
- ಓದುವ ಒತ್ತಡಗಳು ಹೆಚ್ಚಿರುತ್ತವೆ
- ಹೆತ್ತವರ ನಿರೀಕ್ಷೆಗಳನ್ನು ಮುಟ್ಟಲು ಆಗುವುದಿಲ್ಲ
- ತಾವು ಚೆನ್ನಾಗಿ ಕಾಣಬೇಕೆಂಬ ಯೋಚನೆಗಳುಕಾಡುತ್ತವೆ.
- , ಸಾಮಾಜಿಕ ಜಾಲತಾಣಗಳ ಪ್ರಭಾವ ಬಹಳ ಇರುತ್ತವೆ.
- ಸ್ನೇಹಿತರು ಮತ್ತು ಪರಿಸರದ ಪ್ರಭಾವಗಳು ಅವರನ್ನು ಹೈರಾಣಾಗಿಸುತ್ತವೆ.
- ಇವೆಲ್ಲದರ ನಡುವೆ ಸಮತೋಲನ ಸಾದಿಸುವಷ್ಟು ಅವರಿನ್ನೂ ಪಳಗಿರುವುದಿಲ್ಲ.
- ಮಕ್ಕಳ ಮನಸನ್ನು ಅರಿಯುವುದು ಬಹಳ ಮುಖ್ಯ.
- ನಾವು ಅವರ ವಯಸ್ಸಿನಲ್ಲಿ ಹೇಗಿದ್ದೇವೋ ಹಾಗೆ ಅವರು ಇರಲು ಆಗುವುದಿಲ್ಲ. ಕಾಲ ಬದಲಾಗಿದೆ. ಮಕ್ಕಳೂ ಬದಲಾಗಿದ್ದಾರೆ.ನಾವೂ ಬದಲಾಗಬೇಕಿದೆ.
- ನಮ್ಮ ಕಾಲದ ಕಟ್ಟುನಿಟ್ಟಿನ ನಿಯಮಗಳು ಈಗಿನ ಕಾಲಕ್ಕೆ ಪೂರ್ತಿಯಾಗಿ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಅಗತ್ಯ ಬದಲಾವಣೆ ಮಾಡಿಕೊಂಡು, ಮಕ್ಕಳಿಗೆ ಅದನ್ನು ಪಾಲಿಸುವಂತೆ ಹೇಳಬೇಕು.
- ಮಕ್ಕಳಿಗೆ ಅತಿಯಾಗಿ ಮುದ್ದು ಮಾಡದೆ, ಸಣ್ಣವರಿರುವಾಗಲೇ ತಿದ್ದಿ ಬುದ್ಧಿ ಹೇಳುವುದನ್ನು ಅಭ್ಯಾಸ ಮಾಡಬೇಕು.
- ಜೋರು ಮಾಡಿಯೇ ಹೇಳಬೇಕು ಎಂದೇನಿಲ್ಲ. ಮೃಧುವಾಗಿ, ಸಮಾಧಾನದಿಂದ ಬುದ್ಧಿ ಹೇಳಿದರೆ ಮಕ್ಕಳು ಖಂಡಿತ ಕೇಳುತ್ತಾರೆ.
- ಗುರುಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂದು ನಾವು ನಡೆದು ಅವರಿಗೆ ತೋರಿಸಬೇಕಿದೆ.
- ದೇವರಮೇಲಿನ ನಂಬಿಕೆ ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ತಿಳಿಸಬೇಕಿದೆ.
- ಶಿಸ್ತು, ಶ್ರದ್ಧೆ,ಪರಿಶ್ರಮಗಳು ಸಾಧನೆಗೆ ಅಡಿಪಾಯ ಎಂದು ಅವರಿಗೆ ತಿಳಿಸಬೇಕಿದೆ.
- ಹಣದ ಬೆಲೆ ಏನು? ಗುಣದ ಬೆಲೆ ಏನು? ಎನ್ನುವುದು ಅವರಿಗೆ ಅರ್ಥವಾಗಬೇಕಿದೆ.
- ಸರಿ ತಪ್ಪುಗಳ ವ್ಯತ್ಯಾಸ ಅರ್ಥಮಾಡಿಸಬೇಕಿದೆ.
- ಸೂಕ್ಷ್ಮ ಸಂವೇದನೆಗಳನ್ನು ಕಲಿಸಬೇಕಿದೆ.
- ಹೊಂದಿಕೊಳ್ಳುವ ಗುಣವೂ ಬಹಳ ಮುಖ್ಯ.
- ಮನೆಯ ಕೆಲಸಗಳನ್ನೂ ಮಾಡುವ ತಿಳುವಳಿಕೆ,ಆಸಕ್ತಿ, ಜಾಣ್ಮೆಯೂ ಅವರಿಗೆ ಅಗತ್ಯವಿದೆ.
ಮಳೆ ಕೈಗೆ ಸಿಗದ ಮಾಯಾಮೃಗವಾಗದೆ ಇರಲಿ
CBSEಯಿಂದ ಸ್ಟೇಟ್ ಬೋರ್ಡ್ ಗೆ
ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSE ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...
-
ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSE ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...
-
ನಮ್ಮ ಬಾಳಲ್ಲಿ ಹಲವು ಗುರುಗಳು ಬಂದಿರುತ್ತಾರೆ. ಹಾಗೆಂದು ಅವರೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವರು ಮಾತ್ರ ಸದಾಕಾಲ ಮನದಾಳದಲ್ಲಿ ಬೆಳಗುವ ನಂದಾ ದೀಪದಂತೆ, ನಿರಂತರವ...