ದೇಹತೂಕವು ಬರಿ ಸೌಂದರ್ಯ ದ್ಯೋತಕವಲ್ಲ. ಬದಲಾಗಿ ಅದರಲ್ಲಿ ಆರೋಗ್ಯದ ಗುಟ್ಟಿದೆ. ನಮ್ಮ ಎತ್ತರಕ್ಕೆ ಅನುಗುಣವಾಗಿ ಸಮತೂಕವನ್ನು ಹೊಂದಿರುವುದು ಅನಿವಾರ್ಯವಾಗಿದೆ.
ಅಧಿಕ ತೂಕದ ದುಷ್ಪರಿಣಾಮಗಳು
* ಮಧುಮೇಹ ಮತ್ತು ಅಧಿಕ ರಕ್ತದೊತ್ತಡ
ಬರುವ ಹೆಚ್ಚಿನ ಸಾಧ್ಯತೆ ಇದೆ.
* ಸ್ವಲ್ಪ ಕೆಲಸ ಮಾಡಿದರೂ ಆಯಾಸವಾಗುತ್ತದೆ.
* ಕೀಳರಿಮೆ ಉಂಟಾಗುತ್ತದೆ.
* ಸೌಂದರ್ಯ ಕಡಿಮೆಯಾದಂತೆ ಅನಿಸುತ್ತದೆ.
* ಸಮತೋಲನ ತಪ್ಪಿ ಬೀಳುವ ಸಾಧ್ಯತೆ ಹೆಚ್ಚು.
ತೂಕ ನಿಯಂತ್ರಣ ಹೇಗೆ ಸಾಧ್ಯ?
* ನಿಯಮಿತವಾಗಿ ಆಹಾರ ಸೇವಿಸಬೇಕು.
* ವಯಸ್ಸಿಗೆ ಅನುಗುಣವಾಗಿ ವ್ಯಾಮಮ ಮಾಡಬೇಕು.
* ನಾರಿನಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.
* ಕೊಬ್ಬಿನಾಂಶ ಹೆಚ್ಚಿರುವ ಕರಿದ ತಿಂಡಿ, ಹೊರಗಿನ ಆಹಾರದ ಮೇಲೆ ನಿಯಂತ್ರಣವಿರಬೇಕು.
* ಹೆಚ್ಚು ನೀರು ಸೇವಿಸಬೇಕು.
* ಸಿಹಿ ಪದಾರ್ಥ ಸೇವನೆಗೆ ಮಿತಿಯಿರಲಿ.
* ದುರಾಬ್ಯಾಸಗಳಿಂದ ದೂರವಿರಬೇಕು.
* ಬೆಳಿಗ್ಗೆ ಬೇಗ ಏಳಬೇಕು.
* ರಾತ್ರಿ ಬೇಗ ಮಲಗಬೇಕು.
* ದಿನವಿಡೀ ಚಟುವಟಿಕೆಯಿಂದ ಇರಬೇಕು.
* ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಬೇಕು.
ಸಮತೂಕ ನಿರ್ವಹಣೆಯ ಪ್ರಯೋಜನಗಳು
* ನಮಗೆ ಉತ್ತಮ ಆರೋಗ್ಯ ಹೊಂದಲು ಸಹಾಯಮಾಡುತ್ತದೆ.
* ನಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
* ಚಟುವಟಿಕೆಯಿಂದ ಇರಲು ಸಹಾಯಮಾಡುತ್ತದೆ.
* ಆಕರ್ಷಕ ವ್ಯಕ್ತಿತ್ವ ಹೊಂದಲು ಕಾರಣವಾಗುತ್ತದೆ.
* ಬೇರೆಯವರ ಟೀಕೆಗಳಿಂದ ಸುರಕ್ಷಿತವಾಗಿರಲು ಸಾಧ್ಯ.
ಈ ರೀತಿ ಉತ್ತಮ ದೇಹ ತೂಕ ನಿರ್ವಹಣೆ ನಮ್ಮ ಸರ್ವತೋಮುಖ ಒಳಿತಿಗೆ ಕಾರಣವಾಗುತ್ತದೆ. ಆದ್ದರಿಂದ ಅತಿಯಾಗಿ ತಿನ್ನುವುದನ್ನು ಬಿಟ್ಟು, ಚಟುವಟಿಕೆಯಿಂದ ಇದ್ದು, ಸಮತೂಕ ಹೊಂದುವುದು ಅತೀ ಅಗತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ