ನಗೆಯು ಅರಳಲಿ ಮುಖಾರವಿಂದದಲಿ, ಅದು ಮಗುವಿನಂತಿರಲಿ, ಹೊಸ ನಗುವ ಮೂಡಿಸಲಿ..
ನಗುವಿನ ವಿಶೇಷತೆ
ನಗುಮೊಗದ ಸೌಂದರ್ಯವೇ ಅದ್ಬುತ, ಅಪರಿಮಿತ. ಮುಂದಿರುವವರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಅದಕ್ಕಿದೆ. ಒಂದು ನಗುವಿನ ಹಿಂದೆ ಹಲವಾರು ಕಾರಣಗಳು, ಉದ್ದೇಶಗಳು ಇರಬಹುದು. ಅದು ಎಲ್ಲರನ್ನೂ ಉದ್ದಾರ ಮಾಡದಿದ್ದರೂ ಪರವಾಗಿಲ್ಲ, ಯಾರ ಬದುಕನ್ನೂ ಹಾಳು ಮಾಡಬಾರದು ಅಷ್ಟೇ.
- ಅಪರಿಚಿತರನ್ನೂ ಪರಿಚಿತರನ್ನಾಗಿ ಮಾಡಲು ಒಂದು ಮುಗ್ಧ ನಗು ಸಾಕು.
- ಎಷ್ಟೋ ಸಲ ಒಂದು ನಗು ಸ್ನೇಹಿತರನ್ನು, ಆತ್ಮೀಯರನ್ನು ಗಳಿಸಿಕೊಡುತ್ತದೆ .
- ಹಾಗೇ ಕಡಿದುಹೋದ ಸಂಬಂಧಗಳನ್ನು ಜೋಡಿಸಲು ಒಂದು ಕಿರುನಗೆ ಸಾಕು. ಎಲ್ಲ ಸಿಟ್ಟು ಕರಗಿ ನೀರಾಗಿ ಬಿಡುತ್ತದೆ.
- ಹಳೆಯದೆಲ್ಲ ಮರೆತು ಸ್ನೇಹ ಪ್ರೀತಿ ಮತ್ತೆ ನೀರಿನಂತೆ ಹರಿಯಲಾರಂಭಿಸುತ್ತದೆ.
- ಪುಟ್ಟ ಮಕ್ಕಳ ಮುಗ್ಧನಗುವಿನಲ್ಲಿ ಯಾವುದೇ ಕಲ್ಮಶಗಳಿಲ್ಲ. ಅದು ಎಲ್ಲರಲ್ಲೂ ಹೊಸದೊಂದು ಹುರುಪನ್ನು ಖುಷಿಯನ್ನೂ ತುಂಬುತ್ತದೆ.
- ವಯೋವೃದ್ಧರು ತಮ್ಮ ಬೊಚ್ಚು ಬಾಯಿ ಅಗಲಿಸಿ ನಕ್ಕರೆ, ಮನತುಂಬಿ ಬರುತ್ತದೆ.
- ಹಲವಾರು ಬಾರಿ, ನಗು ಒಂದು ಸಾಂತ್ವಾನದಂತೆ ಕೆಲಸ ಮಾಡುತ್ತದೆ.
- ಯಾರಾದರೂ ದುಃಖದಲ್ಲಿದ್ದಾಗ, ಏನು ಹೇಳಬೇಕೆಂದು ತಿಳಿಯದೆ ಒದ್ದಾಡುವಾಗ, ಸಣ್ಣನಗುವೊಂದು ನಮ್ಮ ಮನದ ಭಾವನೆಯನ್ನು ಅವರಿಗೆ ದಾಟಿಸುತ್ತದೆ.
- ನಮ್ಮ ನಗು ಮನಸಿನ ಕನ್ನಡಿಯಂತೆ ವರ್ತಿಸುತ್ತದೆ. ಬುದ್ಧಿವಂತರು ಆ ನಗುವಿನ ಅರ್ಥವನ್ನು ಗುರುತಿಸಬಲ್ಲರು.
ಕೆಟ್ಟ ನಗು
ಆದರೆ ಕೆಲವೊಂದು ನಗು ಕೆಟ್ಟದಾಗಿರುತ್ತದೆ. ಅದರ ಅರ್ಥ ನೋಡಲು ಚೆನ್ನಾಗಿಲ್ಲ ಎಂದಲ್ಲ. ಉದ್ದೇಶ ಚೆನ್ನಾಗಿಲ್ಲ ಎಂದರ್ಥ.
- ಇನ್ನೊಬ್ಬರನ್ನು ನೋಡಿ ಅಪಹಾಸ್ಯ ಮಾಡಿ ನಗುವುದು,
- ವ್ಯಂಗ್ಯವಾಗಿ ನಗುವುದು,
- ಅಹಂಕಾರದಿಂದ ನಗುವುದು,
- ಅಸೂಯೆಯಿಂದ ನಗುವುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ