ಕೂದಲು ಉದುರುವಿಕೆಗೆ ಕಾರಣ, ಪರಿಹಾರ

Page title

 ಸಾಕಷ್ಟು ಜನ,ತಮ್ಮ ಉದುರುವ ಕೂದಲಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ನಮ್ಮ ಉಗುರು,ಚರ್ಮದಂತೆ(ಗಾಯಗಳಾದಾಗ) ಕೂದಲೂ ಕೂಡ ನಿರಂತರವಾಗಿ ಬೆಳೆಯುವ ಕೆಲವೇ ಕೆಲವು ಅಂಗಗಳಲ್ಲಿ ಒಂದು. ಆದರೆ ಅದು ಪ್ರತಿಯೊಬ್ಬರಲ್ಲಿ ಬಿನ್ನವಾಗಿರುತ್ತದೆ ಮತ್ತು ಅದಕ್ಕೆ ಕಾರಣಗಳು ಹಲವಾರು. ಅನುವಂಶೀಯತೆ, ಪರಿಸರ, ಆಹಾರ,ಅಭ್ಯಾಸಗಳಿಂದ ಕೂದಲಿನ ಪ್ರಮಾಣ,ಬಣ್ಣ, ಬೆಳವಣಿಗೆಗಳು ಅವಲಂಬಿತವಾಗಿವೆ. ಬೇರೆಯವರ ಜೊತೆ ಹೋಲಿಸಿಕೊಂಡು ಬೇಸರಪಟ್ಟುಕೊಳ್ಳಬಾರದು. 

  
ಕೂದಲು ಉದುರಲು ಕಾರಣಗಳು

  • ಕೆಲವೊಂದು ಔಷಧಗಳ ಬಳಕೆ, ಉದಾಹರಣೆಗೆ ಕಾನ್ಸರ್ ಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆಗಳು ಇತ್ಯಾದಿ.
  • ನೀರಿನ ಬದಲಾವಣೆ (ಹಳ್ಳಿಯಲ್ಲಿದ್ದವರು ಪಟ್ಟಣಕ್ಕೆ ಹೋದಾಗ, vice versa)
  • ಹವಾಮಾನ ಬದಲಾವಣೆ,(ಮಳೆಗಾಲ, ಚಳಿಗಾಲ)
  • ಒತ್ತಡದಿಂದ (ಚಿಂತೆಯಿಂದ ಆರೋಗ್ಯ ಹಾಳಾಗುತ್ತದೆ)
  • ಜೀವನಶೈಲಿಯ ಬದಲಾವಣೆ,(ಆಹಾರ ನಿದ್ದೆಯಲ್ಲಿ ವ್ಯತ್ಯಾಸ) 
  • ಥೈರಾಯ್ಡ್ ಸಮಸ್ಯೆ ಕೂಡ ಕೂದಲಿನ ಸಮಸ್ಯೆಗೆ ಒಂದು ಕಾರಣ.
  • ಅನುವಂಶೀಯ ಕಾರಣಗಳು(ಹೆತ್ತವರಲ್ಲಿ,ಒಡಹುಟ್ಟಿವರಲ್ಲಿ ಕಡಿಮೆ ಕೂದಲು ಇರುವಾಗ).
  • ವಯಸ್ಸಿನ ಕಾರಣ(ನಲವತ್ತರ ನಂತರ ಕೂದಲು ತೆಳ್ಳಗಾಗುತ್ತದೆ)

ಸರಳ ಪರಿಹಾರಗಳು

 ನಮ್ಮ ಕೆಲವೊಂದು ಪ್ರಯತ್ನಗಳು,ನಮ್ಮ ಕೂದಲನ್ನು ಇನ್ನಷ್ಟು ಹಾಳಾಗದಂತೆ ತಡೆಯಬಲ್ಲವು. ಇರುವ ಪರಿಸ್ಥಿತಿ ಸುಧಾರಿಸಲು ಈ ಕೆಳಗಿನ ವಿಷಯಗಳು ಸಹಾಯ ಮಾಡಬಲ್ಲವು. ನಾವು ಬದಲಾಯಿಸಲು ಆಗದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.

  •  ಸೊಪ್ಪು,ತರಕಾರಿಗಳ ಸೇವನೆ ಬಹಳ ಮುಖ್ಯ.
  •  ವಾರದಲ್ಲಿ ಎರಡು ಮೂರು ಬಾರಿ ತಲೆ ಸ್ನಾನ ಮಾಡಬೇಕು.
  • ಸ್ನಾನದ ಮೊದಲು ನಮಗೆ ಸರಿಹೊಂದುವ ಎಣ್ಣೆ ಹಚ್ಚಿ ಮಾಲೀಸು ಮಾಡಬೇಕು. 
  • ಸ್ನಾನದ ನೀರು ಹೆಚ್ಚು ಬಿಸಿ ಇರಬಾರದು. 
  •  ಸೌಮ್ಯವಾದ, ಅಲ್ಪ ಪ್ರಮಾಣದ ಶಾಂಪೂ ಬಳಸಬೇಕು. 
  •  ಒದ್ದೆ ತಲೆಯನ್ನು ಬಾಚಬಾರದು.
  •  ಬಾಚಣಿಗೆಯನ್ನು ಆಗಾಗ ಸ್ವಚ್ಚಗೊಳಿಸಿ ಉಪಯೋಗಿಸಬೇಕು. 
  •  ಚೆನ್ನಾಗಿ ನೀರು ಕುಡಿಯಬೇಕು.
  •  ಕೂದಲು ಯಾಕೆ ಉದುರುತ್ತಿದೆ ಎಂಬುದರ ಕಾರಣ ತಿಳಿದರೆ ಪರಿಹಾರವೂ ಸುಲಭ. 
  •  ಕೆಲವೊಂದು ಸಮಯದಲ್ಲಿ ಕೂದಲು ಸಹಜವಾಗಿಯೇ ಹೆಚ್ಚು ಉದುರುತ್ತದೆ. ಉದಾಹರಣೆಗೆ, ಮಳೆಗಾಲದಲ್ಲಿ ಸಹಜವಾಗಿ ಕೂದಲು ಉದುರುತ್ತದೆ. ಮತ್ತು ಆ ಜಾಗದಲ್ಲಿ ಹೊಸ ಕೂದಲು ತಾನಾಗಿ ಹುಟ್ಟುತ್ತದೆ. 
  •  ತುಂಬಾ ಕಡಿಮೆ ಸಮಯದಲ್ಲಿ, ಹೆಚ್ಚು ಹೆಚ್ಚು ಕೂದಲು ಉದುರಿದರೆ ಮಾತ್ರ ಸಮಸ್ಯೆ. ಸಮಸ್ಯೆಗಳು ತೀವ್ರವಾಗಿದ್ದರೆ, ವೈದ್ಯರನ್ನು ಕಾಣಬೇಕು. 
  • ತಲೆಹೊಟ್ಟು ಉಂಟಾದರೆ ಮೆಂತೆ ಅಥವಾ ದಾಸವಾಳದ ಹೇರ್ ಪ್ಯಾಕ್ ಮಾಡಿ.

 ಕೆಲವೊಂದು ಸರಳ ಉಪಾಯಗಳು, ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಮಾಡಬಲ್ಲವು. 

ಸರಳ ಉಪಾಯಗಳು

  • ವಿಗ್ ಧರಿಸಬಹುದು. 
  • ತಲೆಯನ್ನು ಪೂರ್ತಿ ಬೋಳಿಸಿ, ಹೊಳೆಯುವ ದುಂಡಗಿನ ತಲೆಯನ್ನು ಹೊಂದಿರುವುದು ಈಗಿನ ಟ್ರೆಂಡ್.
  • ಹಣಕಾಸಿನ ಅನುಕೂಲವಿದ್ದವರು, ಕೂದಲು ಕಸಿ ಮಾಡಿಸಿಕೊಳ್ಳಬಹುದು.

ಇನ್ನೊಂದು ವಿಷಯ. ಇರುವ ಪರಿಸ್ಥಿತಿಯನ್ನು ಸುಧಾರಿಸಲು ಆಗುವ ಎಲ್ಲ ಪ್ರಯತ್ನವನ್ನೂ ಮಾಡೋಣ. ಅದರ ಹೊರತಾಗಿಯೂ, ಯಾವದೇ ಪ್ರಗತಿ ಕಾಣದಿದ್ದರೆ, 
ವಾಸ್ತವವನ್ನು ಒಪ್ಪಿಕೊಳ್ಳುವುದು ಜಾಣತನ. 


ಕಾಮೆಂಟ್‌ಗಳಿಲ್ಲ:

ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ,...