ಮನುಜನೊಬ್ಬ ಕೇಳಿದ ಯಾರು ಇಲ್ಲಿ ಶ್ರೇಷ್ಠರು?
ಸಾಧುವೊಬ್ಬ ಹೇಳಿದ ಸೂರ್ಯ ದೇವ ಹಿರಿಯನು,
ಯಾಕೆ ಎಂದು ಕೇಳಲು ಬೆಳಕನೀವ ಎಂದನು.
ಇಲ್ಲ ಇಲ್ಲ ,ಸೂರ್ಯನನ್ನು ಮರೆಮಾಚುವ, ಮೇಘರಾಜ ಹಿರಿಯನು.
ಇಲ್ಲ ಇಲ್ಲ, ಮೇಘವನ್ನು ಓಡಿಸುವ, ವಾಯುದೇವ ಹಿರಿಯನು.
ಇಲ್ಲ ಇಲ್ಲ,ವಾಯುವನ್ನು ತಡೆಯುವ
ವೃಕ್ಷರಾಜ ಹಿರಿಯನು.
ಇಲ್ಲ ಇಲ್ಲ, ವೃಕ್ಷವನ್ನು ಉರುಳಿಸುವ,
ಗಜರಾಜ ಹಿರಿಯನು.
ಇಲ್ಲ ಇಲ್ಲ, ಗಜರಾಜನ ಪಳಗಿಸುವ
ಮಾವುತನೇ ಹಿರಿಯನು.
ಹೌದು ಹೌದು ಎಂದರು ಎಲ್ಲರೂ.
ಎಲ್ಲರೂ ತಮ್ಮ ತಮ್ಮ ಧರ್ಮದಿಂದ ಮೆರೆದರೆ,
ಮಾನವ ಮಾತ್ರ ತನ್ನ ಕರ್ಮದಿಂದ ಮೆರೆದ.
ತನ್ನ ತಾನೇ ಮರೆತು, ಅವ ಮೆರೆದ,
ನಡೆದು ಬಂದ ದಾರಿಯ ತೊರೆದ,
ಏರಿದ ಏಣಿಯ ಒದ್ದ,
ಅವನ ಮನಸಿಲ್ಲ ಶುದ್ಧ,
ಅವನೊಳು ಬಾಳಲಾರ ಬುದ್ಧ,
ಇದು ಸರಿಯಲ್ಲ ಸಿದ್ದ.
ತಾನು ತೋಡಿದ ಹಳ್ಳದಲ್ಲಿ,
ತಾನೇ ಅವ ಬಿದ್ದ,
ಏಕೆಂದು ತಿಳಿಯದೆ ಅವ ನೊಂದ,
ಕೊನೆಗೆ ಅವ ಕಾಲವಾದ.
ತಾನು ಉಳಿಸಿದ ಹೊನ್ನನು ,
ಅವನೆ ಗಳಿಸಿದ ಮಣ್ಣನು
ಮತ್ತೆ ವರಿಸಿದ ಹೆಣ್ಣನು
ಒಯ್ಯಲ್ಲಿಲ್ಲ ಜೊತೆಗೇನೂ ,
ಹಿಂಬಾಲಿಸಿದ ಹೆಸರನೂ,
ಕರೆಯಲಿಲ್ಲ ಅವನೇನು,
ಬಂದುಬಿಡು ಜೊತೆ ನೀನು,
ಏನಿದ್ದರಿನ್ನೇನು? ಅರಿತಿಲ್ಲ ತನ್ನ ತಾನು,
ಅವನರಿತಿಲ್ಲ ತನ್ನ ತಾನು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ