ಮಕ್ಕಳೊಂದಿಗೆ ಮಗುವಾಗಿ,
ಅವರ ನಗುವಿಗೆ ಜೊತೆಯಾಗಿ,
ನೋವಿನಲ್ಲಿ ನೆರಳಾಗಿ,
ಒಲವ ಮಳೆಯ ಸುರಿಸಿ,
ಕನಸು ಬೆಳಕು ದೀಪವಾಗಿ,
ಅವರು ಕಳೆವ ಸಮಯವಾಗಿ.
ಮಾತು ಕೇಳೋ ಜೊತೆಯಾಗಿ
ಬುದ್ಧಿ ಹೇಳೋ ಗುರುವಾಗಿ
ಸಂತೈಸೋ ಹೆಗಲಾಗಿ,
ಮಮತೆಯ ಮಡಿಲಾಗಿ
ತಲೆಸವರೋ ತಂದೆಯಾಗಿ
ದಾರಿ ತೋರೋ ಬೆಳಕಾಗಿ
ಜೊತೆ ಇರುವ ಭರವಸೆಯಾಗಿ,
ನೆರಳು ನೀಡೋ ಮರವಾಗಿ.
ನುಡಿದಂತೆ ನಡೆದು ದಾರಿ ತೋರಿ,
ಸತ್ಯ ಧರ್ಮದ ಪಾಠ ಹೇಳಿ
ನೀತಿ ನಡತೆಯ ಬೆಲೆಯ ತಿಳಿಸಿ
ಹೆಣ್ಣು,ಮಣ್ಣಿಗೆ ತಲೆಯ ಬಾಗಿ
ಬಾಳುವಂತೆ ಬದುಕು ಕಲಿಸಿ
ಹೆತ್ತವರಾಗಿರಿ ಮಕ್ಕಳೊಂದಿಗೆ,
ಹೆತ್ತವರಾಗಿರಿ ಮಕ್ಕಳೊಂದಿಗೆ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ