ಬೀಜ ಮೊಳೆತು ಬೆಳೆಯಲಿ,
ಚಿಗುರು ಚಿಗುರಿ ಬಾಳಲಿ,
ಗಿಡ ಬೆಳೆದು ಮರವಾಗಲಿ,
ಹಕ್ಕಿ ಗೂಡು ಕಟ್ಟಲಿ,
ದಣಿದ ಜೀವ ಒರಗಲಿ ,
ಮರದ ತುಂಬ ಹೂವಿರಲಿ
ಬೆಳೆಬೆಳೆದು ಕಾಯಾಗಲಿ,
ಅದು ಬಲಿತು ಹಣ್ಣಾಗಲಿ,
ಹಣ್ಣು ಹಸಿವ ತಣಿಸಲಿ,
ಬಾಳು ಸಾರ್ಥಕವಾಗಲಿ.
ಹೆಣ್ಣಿಗೊಂದು ಮಗುವಿರಲಿ,
ಅದು ಹೆಣ್ಣಾಗಿರಲಿ,
ಅಥವಾ ಗಂಡಾಗಿರಲಿ,
ಅದು ಮುತ್ತಾಗಿರಲಿ,
ಸುಗುಣ ಸುಶೀಲವಾಗಿರಲಿ,
ಹೆತ್ತವರ ಕಣ್ಣಾಗಲಿ,
ಹೊಟ್ಟೆ ತಂಪಾಗಿಸಲಿ .
ಮಗುವಿನಂತ ಮನಸಿರಲಿ,
ಹೂವಿನಂತ ಕನಸಿರಲಿ ,
ಎಲ್ಲ ಒಳಿತು ಬಯಸುತಿರಲಿ ,
ಸದಾ ಕ್ರಿಯಾಶೀಲವಾಗಿರಲಿ,
ತಾ ನಕ್ಕು, ನಗಿಸುತಿರಲಿ ,
ಕಹಿಯೆಲ್ಲ ಮರೆತಿರಲಿ,
ನಿಮ್ಮೆಲ್ಲಾ ಸೌಂದರ್ಯ,
ಸಂಗಾತಿಗೆ ಮೀಸಲಿರಲಿ.
ಒಳಗಿರುವ ಬುದ್ಧಿ,
ಸತ್ಕರ್ಮಕ್ಕೆ ಮೀಸಲಿರಲಿ,
ಪಡೆದ ಅನುಭವ,
ಕರುಳಬಳ್ಳಿಗಳ ದಾರಿದೀಪವಾಗಿರಲಿ.
ಸೋಲದ ಛಲವಿರಲಿ,
ಸೋಲಿಸುವ ಬಲ ಬೇಡ,
ಕಣ್ಣಿeರು ಒರೆಸುವ,
ಮನಸು ನಿಮಗಿರಲಿ.
ಪರರ ಕನಸಿನ ಸಮಾದಿಯ ಮೇಲೆ,
ಅರಮನೆ ಕಟ್ಟುವ ಕ್ರೌರ್ಯ ಬೇಡ.
ಪರರ ತಟ್ಟೆಯ ಮೃಷ್ಟಾನ್ನಕ್ಕಿಂತ,
ನಮ್ಮದೇ ಬಟ್ಟಲಿನ ಗಂಜಿ ಮೇಲು.
ದೂರದ ಬೆಟ್ಟ ನುಣ್ಣಗೆ ಇರಬಹುದು,
ಹತ್ತಿರಕ್ಕೆ ಹೋದರೆ ನಿಜವು ತಿಳಿವುದು.
ಬದುಕು ಹೇಗೆe ಇರಲಿ,
ಪ್ರೀತಿಸುವ ಮನಸು ನಮಗಿರಲಿ.
ಪ್ರೀತಿಸುವ ಕನಸು ನಿಮಗಿರಲಿ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ