ಗುರುವೆಂಬ ಹರಿ,
ಗುರುನಮನ
ತೋರಿಸುವ ದಾರಿ,
ನಡೆಯದಿರು ಮೀರಿ,
ನೀನಾಗುವೆ ಜಾಣ ಮರಿ.
ಶಿಕ್ಷಕರೆಂದರೆ,
ಶಿಕ್ಷೆ ನೀಡುವರಲ್ಲ;
ಶಿಕ್ಷಣ ನೀಡುವವರು,
ಶಿಕ್ಷೆಯಾಗದಂತೆ ತಡೆಯುವವರು.
ಅರಿವೆಂಬ ಬೆಳಕ,
ಮನದಲ್ಲಿ ಸೇರಿಸಿ,
ಜ್ಞಾನದಾಹವನು ಮತ್ತಷ್ಟು ಕೂಡಿಸಿ,
ಸನ್ನಡತೆಯ ಭಾವವನ್ನು ಹೃದಯದಲ್ಲಿ ಇರಿಸಿ,
ನೀವೆಲ್ಲ ಒಂದೆ,
ಈ ಮಣ್ಣಿನ ಮಕ್ಕಳು,
ಎನ್ನುವ ವಸುದೈವ ಕುಟುಂಬದ
ಕಲ್ಪನೆಯ ಬೆಳೆಸಿ,
ನಮ್ಮೆಲ್ಲರೆದೆಯಲ್ಲಿ,
ಮರದಂತೆ ಬೆಳೆದು,
ಜ್ಞಾನದಾಬೆಳಕನು ನಮಗೆ,
ನೆರಳಾಗಿ ಚೆಲ್ಲಿ,
ಹೊಸದಾರಿದೀವಿಗೆಯ
ನಮಗಾಗಿ ಹುಡುಕಿ,
ತನ್ನ ಹಳೆ ಜೋಳಿಗೆಯ
ಅದಕಾಗಿ ತಡಕಿ,
ನಿಮ್ಮನ್ನು ಹೆತ್ತವರ
ಹೆಸರುಳಿಸಬೇಕು,
ಕಲಿಸಿದಾ ಗುರು ನಾನೆಂದು
ತಾ ಹೇಳಬೇಕು.
ಹೆತ್ತವಗೆ ಹಗುರಾಗಿ,
ಗುರುವಿಗೆ ಗರಿಯಾಗಿ,
ದೇಶಕ್ಕೆ ಶರಣಾಗಿ
ಬದುಕಿ ಬಾಳಿ.
ನಿಮ್ಮೆಲ್ಲಾ ಹರಕೆಗಳು
ನಿಜವಾಗೊ ವೇಳೆಯೊಳು
ಮರಿತಿಲ್ಲ ನಿಮ್ಮನ್ನು,
ಮರೆಯಾದ ಹೊನ್ನನ್ನು.
ಯುಗದಾದಿಗಳು ಕಳೆದರೂ
ಮರಳುವ ಹುಣ್ಣಿಮೆಗೆ,
ನೆನಪಿಸುವ ಶಕ್ತಿಗೆ,
ಇದೋ ನಮ್ಮ ಗುರು ನಮನ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಹಕ್ಕಿ ಗೂಡಿಗೆ ಮರಳಿದೆ
ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ,...
-
ಬೆಕ್ಕುಗಳೆಂದರೆ ಯಾರಿಗೂ ಅಷ್ಟೇನೂ ಒಲವಿಲ್ಲ. ಅವುಗಳ ಅಂತರಂಗ ಅರಿವಾದರೆ ತಾನೇ! , ಇಷ್ಟವಾಗುವುದು. ಅವೇನೂ ಕೃತಘ್ನ ಪ್ರಾಣಿಗಳಲ್ಲ.. ಅನ್ನ ಕೊಡುವ ಕೈಯನ್ನು ಅದು ಮರೆಯುವ...
-
ಅಮ್ಮನಾಗುವುದಂದರೆ, ಬರೀ ಮಗಳಿಗೆ ತಾಯಿಯಾಗುವುದಲ್ಲ, ನನ್ನ ಹೆತ್ತಮ್ಮ ನನ್ನು ನಾನರಿಯುವುದು, ಅವಳ ಅಂತರಂಗವನು ನಾನುಭವಿಸುವುದು. ಅಮ್ಮ ಏಕೆ ಸದಾ ಬಯ್ಯುತ್ತಾಳೆ, ಸದಾ ಸಿ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ