ಮಗುವಂತೆ ನಗುವವರು,
ಪರರ ನೋವಿಗೆ ಆಳುವವರು,
ನೋವಿಗೆ ಹೆಗಲಾಗುವವರು,
ಬೇಗೆಗೆ ನೆರಳಾಗುವವರು,
ಬಳ್ಳಿಗೆ ಮರವಾಗುವವರು,
ಹೃದಯವಂತರು.
ಬಾಳದೆ ಹೇಳದವರು,
ಹೇಳದೆ ಅರಿಯುವವರು,
ಬೇಡದೆ ನೀಡುವವರು,
ಹೇಳಲು ಕಾಯದವರು,
ತಿರುಗಿ ನೋಡಲು ಮರೆಯದವರು, ಹೃದಯವಂತರು.
ಹಸಿವನ್ನು ತಣಿಸುವವರು,
ನೀರಡಿಕೆ ಅರಿವವರು,
ದನಿಗೆ ಕಿವಿಯಾಗುವವರು,
ಆಸೆಯಿಲ್ಲದೆ ಪ್ರೀತಿಸುವವರು,
ಬಯಸದೇ ಪೂಜಿಸುವವರು,
ಹೃದಯವಂತರು.
ಯಾರನ್ನೂ ಕಾಯಿಸದವರು,
ಇರುವೆಯನ್ನೂ ನೋಯಿಸದವರು,
ನೋವಲ್ಲೂ ನರಳದವರು,
ಕೆಟ್ಟದ್ದು ಬಯಸದವರು,
ಕೈಹಿಡಿದು ನಡೆಸುವವರು,
ಹೃದಯವಂತರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ