ಎಲ್ಲೆಲ್ಲೋ ಅಲೆದಾಡುತ್ತಿದ್ದ, ಆ ಜೇನುಮನಗಳು
ವಿದಾಯ
ಒಂದುಗೂಡಿದವು ಈ ಜೇನುಗೂಡಲಿ.
ಭಿನ್ನ ಭಾಷೆಯ, ರೀತಿ ನೀತಿಯ,
ಮುಗ್ದ ಹೃದಯಗಳು ಜತೆಯಾದವು,
ಈ ಜೇನುಮನೆಯಲಿ.
ನಿನ್ನೆಯೆಲ್ಲ ಅಪರಿಚಿತರಂತಿದ್ದ ಅವು
ತೀರಾ ಆತ್ಮೀರಾಗಿವೆ ಇಂದು,
ಗುರುವೆಂಬ ಹೆಜ್ಜೇನು ಬಂದಾಗ
ಹೆದರಿ ಮೌನವಾಗುವ ಅವು,
ಅವರು ಹೊರಟೊಡನೆ, ಗುಂಯ್ಗುಡುತ್ತವೆ.
ಆಟ ಪಾಠಗಳ ನಡುವೆ ,
ಸ್ನೇಹ ಸಂಬಂಧಗಳ ಬೆಳೆಸಿ,
ಎಲ್ಲದಕು ಕಿವಿಯಾಗುತ ,
ತಮ್ಮಂತರಂಗವನು ಹರಿಬಿಟ್ಟು
ಖುಷಿಖುಷಿಯಾಗಿ ಬದುಕುತ್ತಿವೆ
ಹೊರ ಪ್ರಪಂಚದ ಪರಿವೆಯಿಲ್ಲದೆ.
ಒಮ್ಮೆ ಗರಿಬಿಚ್ಚಿದ ಹಕ್ಕಿಯಂತೆ ಹಾರಿ,
ಕೆಲವೊಮ್ಮೆ ನೀರಲ್ಲಿ ಬಿದ್ದ ,
ಇರುವೆಯಂತೆ ಒದ್ದಾಡಿ ,
ಮರುದಿನ ಏನಿಲ್ಲವೆಂದು ಮರೆತು
ಹಾಡುವ ಕೋಗಿಲೆಗಳಂತೆ ಇವರು.
ಬಾವನಾಲೋಕದಲ್ಲಿ ಹಾರಾಡುತ್ತಾ,
ಬಾವಜೀವಿಗಳೂ ಬುದ್ಧಿವಂತರೂ ಆಗಿ
ಕಾಣುವ ಮೊದ್ದು ಮುದ್ದು ಗಳು.
ತಮ್ಮ ಸಂತಸಕ್ಕೆ ಪಾರವೇ ಇಲ್ಲವೆಂಬಂತೆ,
ಗಗನದಲ್ಲಿ ಹಾರಾಡುತ್ತಿದ್ದ
ಆ ಜೇನು ಮನಗಳು ,
ಚಡಪಡಿಸುತ್ತಿವೆ ನೀರಿನಿಂದ
ತೆಗೆದ ಮೀನಿನಂತೆ.
ಹೊಸ ಗೂಡ ಹುಡುಕಲು,
ಹಾರಬೇಕಿದೆ ದೂರ,
ಮನಸಾಗಿದೆ ಬಲುಭಾರ.
ಈ ಪುಟ್ಟ ಭೂಮಿಯಲ್ಲಿ,
ಮತ್ತೆ ಸಂಧಿಸುವ ಕನಸಿನೊಂದಿಗೆ,
ಆ ಜೇನು ಮನಗಳು,
ಕೊನೆಗೂ ಹೇಳುತಿವೆ,
ಕಣ್ಣೀರ ವಿದಾಯ....!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಹಕ್ಕಿ ಗೂಡಿಗೆ ಮರಳಿದೆ
ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ,...
-
ಬೆಕ್ಕುಗಳೆಂದರೆ ಯಾರಿಗೂ ಅಷ್ಟೇನೂ ಒಲವಿಲ್ಲ. ಅವುಗಳ ಅಂತರಂಗ ಅರಿವಾದರೆ ತಾನೇ! , ಇಷ್ಟವಾಗುವುದು. ಅವೇನೂ ಕೃತಘ್ನ ಪ್ರಾಣಿಗಳಲ್ಲ.. ಅನ್ನ ಕೊಡುವ ಕೈಯನ್ನು ಅದು ಮರೆಯುವ...
-
ಅಮ್ಮನಾಗುವುದಂದರೆ, ಬರೀ ಮಗಳಿಗೆ ತಾಯಿಯಾಗುವುದಲ್ಲ, ನನ್ನ ಹೆತ್ತಮ್ಮ ನನ್ನು ನಾನರಿಯುವುದು, ಅವಳ ಅಂತರಂಗವನು ನಾನುಭವಿಸುವುದು. ಅಮ್ಮ ಏಕೆ ಸದಾ ಬಯ್ಯುತ್ತಾಳೆ, ಸದಾ ಸಿ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ